 ಮೂಲದೊಡನೆ ಪರಿಶೀಲಿಸಿ

ಕರ್ಷಣ೨ : ಒಂದು ತಂತಿಯನ್ನು ಬಿಗಿಗೊಳಿಸಿದಾಗ ಅದರ ಪ್ರತಿಯೊಂದು ತುಣುಕೂ ಅನುಭವಿಸುವ ಬಲ (ಟೆನ್ಷನ್), ಎಳೆತ, ಬಿಗುಪೂ.  ಯು ಸರಳರೇಖೆಯಲ್ಲಿರುವ ಒಂದು ಎಗರದ (ಇನ್ಎಲ್ಯಾಸ್ಟಿಕ್) ಬಿಗಿತಂತಿ.
PQ ಅದರ ಒಂದು ತುಣುಕು. ಈಗ P ಯನ್ನು T  ಎಂಬ ಒಂದು ಬಲ PA  ದಿಶೆಯಲ್ಲೂ Q ವನ್ನು ಅದೇ ಬಲ T ಯು QB  ದಿಶೆಯಲ್ಲೂ ಎಳೆಯುತ್ತಿವೆ. ಎಂದರೆ ಇಲ್ಲಿ PQ ಮೇಲೆ ವರ್ತಿಸುತ್ತಿರುವ ಎರಡು ಕರ್ಷಣಗಳು ಸಮವಾಗಿವೆ ಮತ್ತು ವಿರುದ್ಧ ದಿಶೆಗಳಲ್ಲಿವೆ. CDಯು ವಕ್ರರೇಖೆಯಲ್ಲಿರುವ ಒಂದು ಎಗರದ ಬಿಗಿತಂತಿ. 
RS ಅದರ ಒಂದು ತುಣುಕು. ಆಗ R ಮತ್ತು S ಗಳಲ್ಲಿ ವರ್ತಿಸುವ ಕರ್ಷಣಗಳು ಸಮವಾಗಿವೆ; ಅವುಗಳ ವರ್ತನ ರೇಖೆಗಳು ವಕ್ರರೇಖೆಗೆ ಆಯಾ ಬಿಂದುಗಳಲ್ಲಿ ಸ್ಪರ್ಶಕಗಳು. ವರ್ತನ ದಿಶೆಗಳನ್ನು ಚಿತ್ರ ೨ರಲ್ಲಿ ತೋರಿಸಿದೆ. ಎಗರುವ ತಂತಿಗಳಲ್ಲಿ ಬಿಂದುವಿನಿಂದ ಬಿಂದುವಿಗೆ ಕರ್ಷಣ ವ್ಯತ್ಯಾಸವಾಗುವುದು.  ವಸ್ತುವಿನ ಯಾವುದೇ ಎರಡು ಬಿಂದುಗಳ ನಡುವೆ ಹಿಗ್ಗಿಸಿದಾಗ ಅದರಲ್ಲಿ ಪ್ರಕಟವಾಗುವ ಗುಣವನ್ನು ಕರ್ಷಣ ಎಂದು ವ್ಯಾಖ್ಯಿಸಬಹುದು. ಉದಾಹರಣೆಗೆ, ತಂತಿಯನ್ನು ಹೀಗೆ ಎಳೆದಾಗ ಅದರ ಬಿಗುಪು ಏರಿ ಶ್ರುತಿತಾರದತ್ತ ಸರಿಯುತ್ತದೆ.   

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ